ವಿಶ್ವ ಕನ್ನಡಿಗ ನ್ಯೂಸ್ http://www.vknews.in ಇದು ದಮನಿತರ ಧ್ವನಿ Wed, 27 Jul 2016 17:10:11 +0000 en-US hourly 1 ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಭಯವಂತೆ , ಅದು ಯಾರಿಂದ ಗೊತ್ತ? http://www.vknews.in/2016/07/27/kejriwal-jeeva-bhaya/ http://www.vknews.in/2016/07/27/kejriwal-jeeva-bhaya/#respond Wed, 27 Jul 2016 15:01:10 +0000 http://www.vknews.in/?p=266410 10TH_KEJRIWAL_1750918g

(ವಿಶ್ವ ಕನ್ನಡಿಗ ನ್ಯೂಸ್ ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದು , ಪ್ರಧಾನಿ ನರೇಂದ್ರ ಮೋದಿ ನನ್ನನು  ಕೊಲೆ ಮಾಡಿಸಲೂಬಹುದು  ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ .

ನರೇಂದ್ರ ಮೋದಿಯವರ ಆಪ್ ವಿರೋಧಿ ನೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ , ಅವರು ನನ್ನನು ಕೊಲೆ ಮಾಡಿಸಲೂಬಹುದು  ಎಂದು ಹೇಳಿಕೆ ನೀಡಿದ್ದಾರೆ , ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸರ್ವನಾಶ ಮಾಡಲು ಹೊರಟಂತಿದೆ , ನಮ್ಮ ಪಕ್ಷದ ಶಾಸಕರು ನಾಯಕರನ್ನು ಸೇರಿದಂತೆ ಅವರು ನನ್ನನು ಕೊಲ್ಲಿಸಬಹುದು ಎಂದು ಹೇಳಿರುವ  ಕೇಜ್ರಿವಾಲ್ ಹೊಸ ವಿವಾದದ ಕಿಡಿ ಹಚ್ಚಿದ್ದಾರೆ .

]]>
http://www.vknews.in/2016/07/27/kejriwal-jeeva-bhaya/feed/ 0
ಫಲಾಹ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ http://www.vknews.in/2016/07/27/parisath-chunavane/ http://www.vknews.in/2016/07/27/parisath-chunavane/#respond Wed, 27 Jul 2016 09:46:01 +0000 http://www.vknews.in/?p=266400 Untitled-1
ತಲಪಾಡಿ(ವಿಶ್ವ ಕನ್ನಡಿಗ ನ್ಯೂಸ್ ) : ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಇತ್ತೀಚೆಗೆ ನಡೆಯಿತು. ಶಾಲಾ ನಾಯಕ, ತೋಟಗಾರಿಕೆ, ಶಿಸ್ತು, ಶುಚಿತ್ವ, ಕ್ರೀಡೆ ಹಾಗೂ ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದಂತೆ 20 ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

ಮುಖ್ಯ ಚುನಾವಣಾಧಿಕಾರಿಗಳಾಗಿ ಅಫ್ರೀಝ್, ಸಹಾಯಕ ಚುನಾವಣಾಧಿಕಾರಿಗಳಾಗಿ ಝಾಕಿರ್, ಫಾರೂಕ್, ತಂಝಿಲ್ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಪಡೆದರು. ಚುನಾವಣಾ ವೀಕ್ಷಣಾಧಿಕಾರಿಯಾಗಿ ಮಿಸ್ಬಾಹ್ ಕರ್ತವ್ಯ ನಿರ್ವಹಿಸಿದರು.

ಶಾಂತಿಯುತ ಮತದಾನಕ್ಕಾಗಿ 10 ನೇ ತರಗತಿ ಉನೈಸ್ ಭದ್ರತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮುಖೋಪಾಧ್ಯಾಯರಾದ ಮಹಮ್ಮದ್ ರಫೀಕ್ ಕೆ, ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಎಂ, ಚಿತ್ರಕಲಾ ಶಿಕ್ಷಕರಾದ ನವೀನ್ ಪ್ರಸಾದ್ ಮೋಂತೆರೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಆರಿಫ್ ಕಲ್ಕಟ್ಟ (ಪ್ರಧಾನ ವರದಿಗಾರರು, ವಿಕೆ ನ್ಯೂಸ್)

]]>
http://www.vknews.in/2016/07/27/parisath-chunavane/feed/ 0
ಹಾಸನ : ಸಂಪೂರ್ಣ ಬಸ್ ಸಂಚಾರ ಬಂದ್, ಖಾಸಗಿ ವಾಹನಗಳದ್ದೆ ದರ್ಭಾರ್ http://www.vknews.in/2016/07/27/ksrtc-navkarara-muskara/ http://www.vknews.in/2016/07/27/ksrtc-navkarara-muskara/#respond Wed, 27 Jul 2016 07:28:44 +0000 http://www.vknews.in/?p=266242  

6d60d28d-0446-4de2-8377-e4a8464d5027

ಹಾಸನ(ವಿಶ್ವ ಕನ್ನಡಿಗ ನ್ಯೂಸ್ ) : ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾಧ್ಯಂತ ಸೋಮವಾರದಿಂದ ಎರಡು ದಿನಗಳ ಕಾಲ ಕರೆಯಲಾಗಿದ್ದ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರವು ಜಿಲ್ಲೆಯಲ್ಲೂ ಕೂಡ ಪೂರ್ಣ ಬೆಂಬಲ ದೊರಕಿದೆ.

ಭಾನುವಾರ ಮಧ್ಯ ರಾತ್ರಿಯಿಂದಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ಸಾಗಲಿಲ್ಲ. ಬಸ್ ನಿಲ್ದಾಣಗಳೆಲ್ಲಾ ಬಿಕೋ ಎನ್ನುತ್ತಿತ್ತು. ಶಾಲಾ-ಕಾಲೇಜಿಗೆ ಹೋಗಬೇಕಾದ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರಲ್ಲೆ ಉಳಿದರು. ಮಾರುಕಟ್ಟೆಗೆ ವ್ಯಾಪರಕ್ಕಾಗಿ ಬರುವವರು ಸಾಧ್ಯವಾಗಲಿಲ್ಲ.

8f77c54a-fea4-4d31-b40b-9e6c7ec62178

ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣಿಸಲು ಸಾಧ್ಯವಾಗದೆ ಕೆಲವರು ಬಸ್ ನಿಲ್ದಾಣದಲ್ಲೆ ಕುಳಿತುಕೊಳ್ಳಬೇಕಾಯಿತು. ನಗರದ ಹೊಸ ಬಸ್‍ನಿಲ್ದಾಣದಲ್ಲಿ ಒಂದು ಸಾರಿಗೆ ಬಸ್ ಕೂಡ ಇರದೆ ಖಾಲಿ ಖಾಲಿ ನಿಲ್ದಾಣ ಕಂಡು ಬಂದಿತು. ಆದರೇ ಖಾಸಗಿ ವಾಹನಗಳ ಒಡಾಟ ಜೋರಾಗಿಯೇ ನಡೆಯಿತು.

ಟೆಂಪೊ, ಆಟೋ, ಅಫೆ ವಾಹನಗಳ ಬೇಡಿಕೆ ಹೆಚ್ಚು ಕಂಡು ಬಂದಿತು. ಸರ್ಕಾರಿ ನೌಕರರು ಕೂಡ ಕೆಲಸಕ್ಕಾಗಿ ಖಾಸಗಿ ವಾಹನವನ್ನೆ ಬಳಸಿದರು. ಸಿಟಿ ಬಸ್ ಇಲ್ಲವಾದರಿಂದ ಆಟೋಗಳು ವಿರಾಮವಿಲ್ಲದಂತೆ ಚಲಿಸಿತು. ಹೊಸ ಬಸ್‍ನಿಲ್ದಾಣ, ಎನ್.ಆರ್. ವೃತ್ತ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ, ಸಂತೇಪೇಟೆ ಸೇರಿದಂತೆ ಇತರೆ ಕಡೆ ಖಾಸಗಿ ವಾಹನಗಳು ಸಾಲು ಸಾಲಾಗಿ ನಿಂತಿರುವುದು ಕಂಡು ಬಂದಿತು.

71feb47d-04eb-4763-a6f5-5dd817e6a828

ಬಸ್ ಮೇಲೆ ಕಲ್ಲು ತೂರಾಟ :

ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಭಾನುವಾರ ಮಧ್ಯ ರಾತ್ರಿಯಿಂದಲೇ ಪ್ರಾರಂಭವಾಗಿದ್ದು, ಆದರೇ ಹಾಸನದ ಹೊರ ಭಾಗದಲ್ಲಿ ರಾಜಹಂಸ ಬಸ್ ಸಂಚಾರ ಮಾಡುತ್ತಿದ್ದನು ಗಮನಿಸಿದ ಕೆಲವರು ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಬಸ್‍ನ ಮುಂಬಾಗದ ಗಾಜು ಹೊಡೆದಿಎ. ಮತ್ತು ಕಿಟಿಕೆ ಗಾಜನ್ನು ಕೂಡ ಹೊಡೆದು ಹಾಕಲಾಯಿತು. ಈ ವೇಳೆ ಬಡಾವಣೆ ಪೊಲೀಸ್ ಠಾಣೆ ಸಿಬ್ಬಂದಿಯವರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾರಿಗೆ ನೌಕರನಾದ ಕೃಷ್ಣೇಗೌಡ, ವಿಠಲ್ ಹಾಗೂ ಪ್ರಕಾಶ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

a53eb7db-5deb-4a4c-aa89-fc49780276e3

ಡಿಸಿ. ಎಸ್ಪಿಯಿಂದ ಶಾಲಾ-ಕಾಲೇಜಿಗೆ ಭೇಟಿ :

ಸಾರಿಗೆ ಬಸ್ ಮುಷ್ಕರ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಶಾಲಾ-ಕಾಲೇಜುಗಳಿಗೆ ಎರಡು ದಿನಗಳಕಾಲ ರಜೆ ಘೋಷಣೆ ಮಾಡಲಾಗಿದ್ದರೂ, ಹಾಸನ ಜಿಲ್ಲೆಯಲ್ಲಿ ರಜೆ ಕೊಡದಂತೆ ಡಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿ ಚೈತ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹಾಸನದ ಸಕಾರಿ ವಿಜ್ಞಾನ ಕಾಲೇಜ್ ಮತ್ತು ಸರ್ಕಾರಿ ಕಲಾ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿದರು.

ಕಡಿಮೆ ಇದ್ದರೇ ರಜೆ ನೀಡುವುದಾಗಿ ಹೇಳಿದರು. ನಂತರ ಇತರೆ ತಾಲ್ಲೂಕುಗಳಿಗೂ ತೆರಳಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನಿಗಾವಹಿಸಿದರು. ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ನೌಕರರ ಮುಷ್ಕರ ಇರುವುದರಿಂದ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಸಲ್ಪ ತೊಂದರೆ ಉಂಟಾಗಿದೆ. ರಜೆ ನೀಡುವ ಮತ್ತು ನೀಡದಿರುವ ಜವಬ್ಧಾರಿಯನ್ನು ಸರ್ಕಾರ ನಮಗೆ ನೀಡಿದೆ.

b2ec5a9c-4423-4c0e-aeaa-31d6056f576b

ಜಿಲ್ಲೆಯಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ರಜೆ ಘೋಷಣೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ವಾಹನವನ್ನು ಕೂಡ ಬಳಸಿಕೊಳ್ಳಲಾಗಿದೆ. ಎಲ್ಲಾವನ್ನು ಗಮನಿಸಿ ಶಾಲಾ-ಕಾಲೇಜುಗಳಿಗೆ ರಜೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.

ಮಂಗಳವಾರ ರಜೆ ಕೊಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ತೀರ್ಮಾನ ಮಾಡುವುದಾಗಿ ಹೇಳಿದರು. ಸೋಮವಾರ ಶಾಲೆ ನಡೆದರೂ ಕೂಡ ವಿದ್ಯಾರ್ಥಿಗಳ ಕೊರತೆ ಇರುವುದರಿಂದ ಆಟ ಮತ್ತು ಊಟ ದ ವ್ಯವಸ್ಥೆ ಮಾಡಿ ಪಾಠ ಮಾಡದಿರಲು ಹೇಳಲಾಗಿದೆ ಎಂದರು.

ಮಲ್ನಾಡ್ ಮೆಹಬೂಬ್ ಸಕಲೇಶಪುರ (ಪ್ರಧಾನ ವರದಿಗಾರರು, ವಿಕೆ ನ್ಯೂಸ್)

 

]]>
http://www.vknews.in/2016/07/27/ksrtc-navkarara-muskara/feed/ 0
ರಾಯಬಾಗ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತಕ್ಕಾಗಿ ಪೊಲೀಸ್ ವಾಹನ http://www.vknews.in/2016/07/27/police-vahana/ http://www.vknews.in/2016/07/27/police-vahana/#respond Wed, 27 Jul 2016 07:23:12 +0000 http://www.vknews.in/?p=266325 5afb04e6-391b-41b4-85b1-e265262c8b40

ರಾಯಬಾಗ(ವಿಶ್ವ ಕನ್ನಡಿಗ ನ್ಯೂಸ್ ) : ರಾಜ್ಯ ಸಾರಿಗೆ ಸಂಸ್ಥೆ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟ್ ಮುಷ್ಕರವು ಮಂಗಳವಾರ ಮುಂದುವರೆದಿದ್ದರಿಂದ ಸಾರಿಗೆ ಸಂಸ್ಥೆ ಬಸ್‍ಗಳು ರಸ್ತೆಗೆ ಇಳಿಯದೇ ಇದ್ದರಿಂದ ತಾಲೂಕಾದಾಂತ್ಯ ಪ್ರಯಾಣಿಕರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಮನೆಯಲ್ಲಿಯೇ ಇರುವಂತ ಪರಿಸ್ಥಿತಿ ಉಂಟಾಯಿತು.

ದಿನನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಬಸ್ ನಿಲ್ದಾಣವು ಪ್ರಯಾಣಿಕರು ಮತ್ತು ಬಸ್‍ಗಳು ಇಲ್ಲದೇ ಭಣಗೂಡುತ್ತಿರುವ ದೃಶ್ಯ ಕಂಡು ಬಂದಿತು. ಬಸ್ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತವಾಗಿ ಒಂದು ಪೊಲೀಸ್ ವಾಹನವನ್ನು ನಿಯೋಜಿಸಲಾಗಿತ್ತು.

ಖಾಸಗಿ ವಾಹನಗಳು ಬೆರಳಿಣಿಕೆಯಲ್ಲಿ ರಾಯಬಾಗದಿಂದ ಚಿಕ್ಕೋಡಿ. ಕುಡಚಿ ಹಾಗೂ ಹಾರೂಗೇರಿಗಳಿಗೆ ಸಂಚರಿಸುತ್ತಿರುವುದು ಕಂಡು ಬಂದವು. ಪ್ರಯಾಣಿಕರು ಸಂಖ್ಯೆಯು ತೀರ ವಿರಳವಾಗಿತ್ತು.

ಸರಕಾರ ಮಂಗಳವಾರ ಸಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಸರಕಾರಿ ಶಾಲಾ ಶಿಕ್ಷಕರು ಸೇರಿದಂತೆ ಬಹುತೇಕ ಅನುದಾನಿತ, ಅನುದಾನರಹಿತ ಶಾಲಾ ಶಿಕ್ಷಕರು ಮನೆಯಲ್ಲಿಯೇ ಉಳಿದು ಸಮಯ ಕಳೆಯುವಂತಾಯಿತು. ಪಟ್ಟಣದ ಕೇಲವೊಂದು ಖಾಸಗಿ ಶಾಲೆಗಳು ಎಂದಿನಂತೆ ಪ್ರಾರಂಭವಾಗಿದ್ದರಿಂದ ಮಕ್ಕಳು ಅಟೋಗಳ ಮೂಲಕ ಶಾಲೆಗೆ ತೆರಳಿದರು.

7a8181a5-a0e8-4499-83d2-910583b42edc

ಸಾರ್ವಜನಿಕರಿಂದ ದಿನನಿತ್ಯ ಸದ್ದು ಗದ್ದಲದಿಂದ ಇರುತ್ತಿದ್ದ ತಾಲೂಕು ಶಕ್ತಿ ಕೇಂದ್ರವಾದ ಮಿನಿವಿಧಾನಸೌಧವು ಮಂಗಳವಾರ ಯಾವದೇ ಜನದಟ್ಟನೆ, ಗೊಜುಗೊಂದಲವಿಲ್ಲದೇ ಶಾಂತವಾಗಿರುವುದು ಕಂಡು ಬಂದಿತು. ಬಹುತೇಕ ಸಿಬ್ಬಂದಿ ಸ್ವಂತ ದ್ವಿಚಕ್ರ ವಾಹನ ಹೊಂದಿದವರಾಗಿದ್ದರಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಕಚೇರಿ ಕೆಲಸಗಳು ಸರಾಗವಾಗಿ ಸಾಗಿದ್ದವು. ನ್ಯಾಯಾಲಯದಲ್ಲಿ ಕಕ್ಷಿಗಾರ ಸಂಖ್ಯೆಗಿಂತ ನ್ಯಾಯವಾದಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು.

ರಾಯಬಾಗ ಮತ್ತು ಕುಡಚಿ ಪಟ್ಟಣಕ್ಕೆ ರೈಲ್ವೆ ಸೌಲಭ್ಯವಿರುವುದರಿಂದ ಮಹಾರಾಷ್ಟ್ರದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮುಷ್ಕರದ ಬಿಸಿ ಅಷ್ಟೋಂದು ತಟ್ಟದಿರುವುದು ಕಂಡು ಬಂದಿತು.

 

]]>
http://www.vknews.in/2016/07/27/police-vahana/feed/ 0
ಅಂದು ನೀವು ಕುಡಿದು ವಾಹನ ಚಲಾಯಿಸದೇ ಇರುತ್ತಿದ್ದರೆ….? http://www.vknews.in/2016/07/27/shaukathmini-story/ http://www.vknews.in/2016/07/27/shaukathmini-story/#respond Wed, 27 Jul 2016 07:22:10 +0000 http://www.vknews.in/?p=266363 vklogoಮಿನಿ ಕಥೆ-1:

ವೃದ್ಧ ದಂಪತಿಗಳಿಬ್ಬರು ಆಸ್ಪತ್ರೆಯ ಮೆಟ್ಟಲೇರಲು ಹರ ಸಾಹಸ ಪಡುತ್ತಿದ್ದರು. ಕೂಡಲೇ ವ್ಹೀಲ್ ಚೆಯರ್ ಬಂದು ಅವರ ಸಹಾಯಕ್ಕೆ ನಿಂತಿತು. ತನ್ನ ಗಂಡನನ್ನು ಕುಳ್ಳಿರಿಸುತ್ತಾ ಆಕೆ ಹೇಳಿದಳು, ಇದಕ್ಕಿರುವ ಸೌಜನ್ಯ ನಮ್ಮ ಉನ್ನತ ವಿದ್ಯಾಭ್ಯಾಸ ಗಳಿಸಿದ ಮಕ್ಕಳಿಗಿಲ್ಲವಲ್ಲ ಎನ್ನುತ್ತಾ ಕರ್ಚೀಫಿನಿಂದ ಕಣ್ಣೊರೆಸಿದಳು.

ಮಿನಿಕಥೆ-2:
ಅವಳ ಒಂದು ಮಂದಹಾಸಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದ. ಕೋಮಾವಸ್ಥೆಯಲ್ಲಿದ್ದ ಆಕೆ ಇವನ ಎಲ್ಲ ಮಾತುಗಳನ್ನು ಫೀಲಿಂಗ್ಸ್ ಗಳನ್ನು ಕೇಳಿಸುತ್ತಿದ್ದಳು. ಆದರೆ ಆಕೆ ತನ್ನ ಭಾವನೆಯನ್ನು ವ್ಯಕ್ತ ಪಡಿಸುತ್ತಲೇ ಇದ್ದಳು ” ಅಂದು ನೀವು ಕುಡಿದು ವಾಹನ ಚಲಾಯಿಸದೇ ಇರುತ್ತಿದ್ದರೆ”

ಮಿನಿಕಥೆ-3

ಬಸ್ಸಿನಲ್ಲಿ‌ಅವಳು ನನ್ನ ಪಕ್ಕದಲ್ಲಿ ಕೂತಿದ್ದಳು. ಅವಳ ಕೈಯಲ್ಲಿ ಮಗು ಇತ್ತು. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅವಳ ಬಸ್ಸಿಗಾಗಿ ಕಾಯುತ್ತಿದ್ದೆ. ಒಮ್ಮೆ ಮನದಿಂಗಿತವನ್ನು ಅವಳಲ್ಲಿ ಪತ್ರದ ಮೂಲಕ ಬಿಚ್ಚಿಟ್ಟಿದ್ದೆ. ಆದರೆ ಅವಳು ಯಾವುದಕ್ಕೂ ಉತ್ತರ ನೀಡಿರಲಿಲ್ಲ. ಹೌದು, ಅವಳು ಹೆತ್ತವರ ಭರವಸೆಯ ಮಗಳಾಗಿದ್ದಳು. ಅವಳ ಗಂಡ ಪುಣ್ಯವಂತ.

-ಶೌಕತ್ ಅಲಿ

]]>
http://www.vknews.in/2016/07/27/shaukathmini-story/feed/ 0
ರಾಯಬಾಗ: ಜೂನಿಯರ್ ಮತ್ತು ಸಿನಿಯರ್ ಬಾಲಕರ, ಬಾಲಕಿಯರ 34ನೇ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಸ್ಪರ್ಧೆ http://www.vknews.in/2016/07/27/champiyan-swpardhe/ http://www.vknews.in/2016/07/27/champiyan-swpardhe/#respond Wed, 27 Jul 2016 07:20:09 +0000 http://www.vknews.in/?p=266331 a8e6edb6-765b-4fa2-9d9e-86c00eb783a0

ರಾಯಬಾಗ(ವಿಶ್ವ ಕನ್ನಡಿಗ ನ್ಯೂಸ್ ) : ಜುಲೈ 21 ರಿಂದ 24ರ ವರೆಗೆ ಮಂಡ್ಯದ ಪಿಇಎಸ್ ಇಂದೂರ ಸ್ಟೇಡಿಯಂದಲ್ಲಿ ನಡೆದ ಸಬ್ ಜೂನಿಯರ್, ಜೂನಿಯರ್ ಮತ್ತು ಸಿನಿಯರ್ ಬಾಲಕರ, ಬಾಲಕಿಯರ 34ನೇ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಸ್ಪರ್ಧೆಯಲ್ಲಿ ಪಟ್ಟಣದ ಟೆಕ್ವಾಂಡೊ ಟ್ರೆನಿಂಗ್ ಕೇಂದ್ರದ ಟೆಕ್ವಾಂಡೊ ಪಟುಗಳು 11 ಚಿನ್ನ, 5 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮಂಗಳವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಟೆಕ್ವಾಂಡೊ ಪಟುಗಳನ್ನು ಮತ್ತು ತರಬೇತಿದಾರ ಜಯದೀಪ ದೇಸಾಯಿ ಅವರನ್ನು ಝೇಂಡಾ ಕಟ್ಟೆಯಲ್ಲಿ ಸ್ವಾಗತಿಸಿದ ಪಟ್ಟಣದ ವಿವಿಧ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಳಿಕ ಮಾತನಾಡಿ ತರಬೇತಿದಾರ ಜಯದೀಪ ದೇಸಾಯಿ, ಈ ಸ್ಪರ್ಧೆಯಲ್ಲಿ ರಾಯಬಾಗದಿಂದ 30 ಟೆಕ್ವಾಂಡೊ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿರುವುದು ನಮ್ಮೇಲ್ಲರಿಗೂ ಹೆಮ್ಮೆ ತಂದಿದೆ ಎಂದರು.

ಶ್ರೀನಾಥ ಜಾಧವ, ರಾಮ ಚವ್ಹಾಣ, ಸುನೀಲ ಕುಲಗುಡೆ, ವಿನೋದ ಕಾಳಗೆ, ಮುರಗೇಶ ನಾಯಿಕ ಸೇರಿದಂತೆ ಮುಂತಾದವರು ಹಾಜರಿದ್ದರು.

 

]]>
http://www.vknews.in/2016/07/27/champiyan-swpardhe/feed/ 0
ಬಿಜೆಪಿ ಕಾರ್ಯಕರ್ತರಿಂದ ಕಾರ್ಗಿಲ್ ವಿಜಯೋತ್ಸವದ ನೆನಪು http://www.vknews.in/2016/07/27/kargil-vijayosthava/ http://www.vknews.in/2016/07/27/kargil-vijayosthava/#respond Wed, 27 Jul 2016 07:18:29 +0000 http://www.vknews.in/?p=266334  

d5db3564-fa14-4d52-8f69-f52aacfd1f88

ಗುಡಿಬಂಡೆ(ವಿಶ್ವ ಕನ್ನಡಿಗ ನ್ಯೂಸ್ ) : ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವದ ಸವಿ ನೆನಪಿಗಾಗಿ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ಮುಖಂಡ ಅಮರೇಶ್, ಭಾರತದ ಸೇನಾಪಡೆ ಕಾರ್ಗಿಲ್ ಯುದ್ಧದಲ್ಲಿ ಪ್ರಾಣದ ಹಂಗು ತೊರೆದು ಶತ್ರು ಸೇನೆಯನ್ನು ಹಿಮ್ಮೆಟ್ಟಿಸಿ ಅಭೂತ ವಿಜಯವನ್ನು Àಸಾಧಿಸಿತು. ಸೈನಿಕರ ಈಪರಾಕ್ರಮವನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಮುಕ್ತ ಕಂಠದಿಂದ ಹೊಗಳಿದರು. ಕಾರ್ಗಿಲ್ ಯುದ್ಧದ ವಿಜಯ ಶತ್ರು ದೇ±ವಾದ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.ಅಷ್ಟೇ ಅಲ್ಲದೆ ಭಾರತದ ಸೈನಿಕ ಶಕ್ತಿಯನ್ನು ಹಗುರವಾಗಿ ಪರಿಗಣಿಸುವ ದೇಶಗಳೂ ಸಹ ಇದರಿಂದ ಪಾಠ ಕಲಿಯುವಂತಾಗಿದೆ ಎಂದರು.

ಮತ್ತೊಬ್ಬ ಹಿರಿಯ ಮುಖಂಡ ತಿಮ್ಮಾರೆಡ್ಡಿ, ದೇಶದ ಸೈನಿಕ ಶಕ್ತಿ ಅಗಾಧವಾಗಿದ್ದು ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಮರ್ಥವಾಗಿದೆ. ಸೇನೆಯಿಂದ ಪ್ರವಾಹ ಪೀಡಿತರ ರಕ್ಷಣೆ, ಸಂತ್ರಸ್ತರಿಗೆ ಆಹಾರ ಪೂರೈಕೆ ಪುನರ್ವಸತಿ, ಗಲಭೆ ಪೀಡಿತ ಪ್ರದೇಶಗಳಲ್ಲಿ ಜನರ ಮತ್ತು ಆಸ್ತಿಪಾಸ್ತಿ ರಕ್ಷಣೆ ಮೊದಲಾದ ಕಾರ್ಯಗಳಲ್ಲಿ ಸೇನೆಯ ಪಾತ್ರ ಆಪಾರವಾಗಿದೆ.

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಆತ್ಮಕ್ಕೆ ಶಾಂತಿ ಕೋರುವುದು ನಮ್ಮೆಲ್ಲರ ಕರ್ತವ್ಯವೆಂದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಜಿ.ಎಸ್. ನಾಗರಾಜು, ನಾಗಭೂಷಣ್ ರೆಡ್ಡಿ, ರಾಜಗೋಪಾಲ್, ನರಸಿಂಹಮೂರ್ತಿ, ಪದ್ಮ, ರಾಜು, ಸೇರಿದಂತೆ ಹಲವು ಕಾರ್ಯಕರ್ತರಿದ್ದರು.

ಬಾಲಾಜಿ ಆರ್, ಗುಡಿಬಂಡೆ (ವರದಿಗಾರರು, ವಿಕೆ ನ್ಯೂಸ್)

]]>
http://www.vknews.in/2016/07/27/kargil-vijayosthava/feed/ 0
ಕಲ್ಲಡ್ಕ : ಸಂಗೀತವಾದಕ ಭಾಸ್ಕರ್ ನಿಧನ http://www.vknews.in/2016/07/27/baskara-rao-nidahana/ http://www.vknews.in/2016/07/27/baskara-rao-nidahana/#respond Wed, 27 Jul 2016 07:12:41 +0000 http://www.vknews.in/?p=266341 40a3c65e-846b-490b-b611-49c9a1ef50c1

ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್ ) : ಕಲ್ಲಡ್ಕ ಸಮೀಪದ ಕೊಳಕೀರು ರಸ್ತೆ ನಿವಾಸಿ, ನಿವೃತ್ತ ಶಿಕ್ಷಕಿ ಭವಾನಿ ಇವರ ಪುತ್ರ ಸಂಗೀತ ವಾದಕ ಭಾಸ್ಕರ ಕೆ.ಎನ್. (45) ಇವರು ಅನಾರೋಗ್ಯ ಕಾರಣದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಈ ಹಿಂದೆ ಹಿನ್ನೆಲೆ ಸಂಗೀತ ವಾದಕರಾಗಿದ್ದು, ಹಲವಾರು ಸಂಗೀತ ರಸಮಂಜರಿ ಮತ್ತು ನಾಟಕಗಳಿಗೆ ಸಂಗೀತ ತಂಡದಲ್ಲಿ ಕಾಂಗೋ ನುಡಿಸುತ್ತಿದ್ದರು. ಆರ್‍ಎಸ್‍ಎಸ್ ಮುಖಂಡ ಡಾ. ಕೆ. ಪ್ರಭಾಕರ ಭಟ್ ದಂಪತಿ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮತ್ತಿತರರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು.

ಪಿ.ಎಂ.. ಪಾಣೆಮಂಗಳೂರು (ಪ್ರಧಾನ ವರದಿಗಾರರು, ವಿಕೆ ನ್ಯೂಸ್)

]]>
http://www.vknews.in/2016/07/27/baskara-rao-nidahana/feed/ 0
ಬಹುಮುಖ ಪ್ರತಿಭೆಯ ಬಡಗು-ತೆಂಕು ತಿಟ್ಟಿನ ಚಂಡೆಯ ಗಂಡುಗಲಿ ಶ್ರೀಯುತ ಕೋಟ ಶಿವಾನಂದರು http://www.vknews.in/2016/07/27/yakshagana-4/ http://www.vknews.in/2016/07/27/yakshagana-4/#respond Wed, 27 Jul 2016 07:09:51 +0000 http://www.vknews.in/?p=266323 2ff67795-065b-493d-8401-ceb031c28bf1

(ವಿಶ್ವ ಕನ್ನಡಿಗ ನ್ಯೂಸ್ ) : ಯಕ್ಷಗಾನದಲ್ಲಿ ಶೃತಿ ತಾಳ ಲಯ ಮದ್ದಲೆ ಚಂಡೆ ಕುಣಿತ ಗಾಯನ ಹೀಗೆ ನುಡಿಸುದರಿಂದ ನವರಸವು ಐಕ್ಯವಾಗುತ್ತದೆ. ಇದರಿಂದ ನೋಡುಗರಿಗೆ ಕೇಳುಗರಿಗೆ ಮನದುಂಬಿ ಬರುತ್ತದೆ.

ಯಕ್ಷಗಾನವೇ ಶ್ರೇಷ್ಠ ಎಂದು ಬಲ್ಲವರು ಹೇಳುತ್ತಾರೆ. ಶುದ್ಧವಾದ ಕನ್ನಡ ಸಂಸ್ಕೃತ ಮಾತು ನಡೆವಳಿಕೆ ಇವೆಲ್ಲವೂ ಯಕ್ಷಗಾನ ಪಾತ್ರ ದಿಂದ ಮಾತ್ರ ಸಾಧ್ಯ. ಇದರಂತೆ ನಮ್ಮ ಕೋಟ ಶಿವಾನಂದರು ತನ್ನ ಹಿನ್ನೆಲೆ ಚಂಡೆವಾದನದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

0391259a-19f8-4ca7-a0ad-609565e3f2f5

ಶ್ರೀಯುತ ರಾಮಕೃಷ್ಣ ಮೇರಾಟಾ ಮತ್ತು ಶ್ರೀಮತಿ ಜಲಜಾಕ್ಷಿಯವರ ಬಡ ಬ್ರಾಹ್ಮಣ ಕುಟುಂಬದಿಂದ ಬಂದ 01 -06-1967ರಂದು ಹುಟ್ಟಿ ಆ ಕಾಲದಲ್ಲಿ ತನ್ನ 7ನೇ ತರಗತಿ ಪಾಸಾಗಿ ವಿದ್ಯಾಭ್ಯಾಸ ತೀಲಾಂಜಲಿ ಹೇಳಿ, ಅಲ್ಲಿ ಇಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ ಮತ್ತು ತನ್ನ ತಾಯಿ ಜಲಜಾಕ್ಷಿಯಮ್ಮ ಪ್ರೇರಣೆಯಿಂದ ಸಣ್ಣವನಿರುವಾಗ ಅಲ್ಲಿ ಇಲ್ಲಿ ಬಯಲಾಟಕ್ಕೆ ಹೋಗಿ ಬಣ್ಣ ಬಣ್ಣದ ವೇಷ ಮಾಡಿದನ್ನು ನೋಡಿ ಇವರಿಗೂ ಸಣ್ಣವನಿರುವಾಗ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿತು. ಮನೆಯ ಸಮೀಪದ ಶ್ರೀಯುತ ಎಂ. ಎನ್. ಮಧ್ಯಸ್ಯರಿಂದ ಹೆಜ್ಜೆಯನ್ನು ಕಲಿತು.

ಆ ಕಾಲದಲ್ಲಿ ಬಾಲಕರ ಯಕ್ಷಗಾನ ಮೇಳದಲ್ಲಿ ತನ್ನ 12ನೇ ವಯಸ್ಸಿನಲ್ಲಿ ಹಾಸ್ಯ ಕಲಾವಿದನಾಗಿ ಶಶಿ ಪ್ರಭೆ ಪರಿಣಯದ ಶ್ರೀಯುತ ಎಂ ಎನ್ ಮಧ್ಯಸ್ಥರ ಶಶಿ ಪ್ರಭೆಯ ಅಜ್ಜಿಯಾಗಿ ರಂಗವೇರಿದರು. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಪ್ರೇರಣೆಯು ಇರಬಹುದು ಏನೋ ಏಕೆಂದರೆ ಸಮೀಪ ವಿದ್ಧ ಕಾರಣ ಅಲ್ಲಿ ಚಂಡೆ ಹೊಡೆಯುವ ಶಬ್ದ ನೋಡಿ ಏಕಲವ್ಯನಂತೆ ಆಗಿನ ಕಾಲದಲ್ಲಿ ತನ್ನ ಎರಡು ಪುಟ್ಟ ಪುಟ್ಟ ಕೈಗಳಿಂದ ಡಬ್ಬವನ್ನು ಕೋಲಿನಿಂದ ಬಡಿದು ಕಲಿತರು ನಮ್ಮ ಕೋಟ ಶಿವಾನಂದರು.

ಹೀಗೆ ಆಗಿನ ಡೇರೆ ಮೇಳವಾದ ಅಮೃತೇಶ್ವರಿ ಮೇಳದಲ್ಲಿ ನಾಲ್ಕು ವರುಷ ಬಾಲಗೋಪಾಲನಾಗಿ ಮತ್ತು ಹಾಸ್ಯ ಕಲಾವಿದನಾಗಿ ನಂತರ ಹೀರೆ ಮಹಾಲಿಂಗೇಶ್ವರ ಮೇಳದಲ್ಲಿ ಚಂಡೆ ವಾದಕನಾಗಿ ಎರಡು ವರುಷ, ಆಗ ಇವರೊಟ್ಟಿಗೆ ಒಡನಾಡಿಯಾಗಿ ಗುರು ರಾಮಕೃಷ್ಣ ಮಂದರ್ತಿ ಮತ್ತು ಭಾಗವತರಾಗಿ ಸುಬ್ರಮಣ್ಯ ಧಾರೇಶ್ವರ ಭಾಗವತರಾಗಿ ಸಾತ್ ನೀಡಿದರಂತೆ, ನಂತರ ಪಂಚಲಿಂಗೇಶ್ವರ ಮೇಳ ಒಂದು ವರುಷ, ಆದನಂತರ ಪಳ್ಳಿ ಕಿಶನ್ ಹೆಗ್ಗಡೆಯವರ ನೇತೃತ್ವದ ಸಾಲಿಗ್ರಾಮ ಮೇಳದಲ್ಲಿ ಕಳೆದ 31 ವರುಷ ಚಂಡೆ ವಾದಕರಾಗಿ ಪ್ರಸ್ತುತ ಕಲಾ ಸೇವೆ ಸಲ್ಲಿಸುತ್ತಿದ್ದಾರೆ.

ಆಗ ಇವರೊಂದಿಗೆ ಒಡನಾಡಿಯಾಗಿದ್ದು ಯಕ್ಷಲೋಕದ ತಾರೆ ಗಾನ ಕೋಗಿಲೆ ಶ್ರೀ ದಿವಂಗತ ಕಾಳಿಂಗ ನಾವಡರ ಮತ್ತು ಗುರು ರಾಮಕೃಷ್ಣ ಮಂದಾರ್ತಿ ಇವರು ಸಂಪೂರ್ಣ ಚಂಡೆವಾದನವನ್ನು ನಮಗೆ ಕಲಿಸಿದರು ಹಾಗು ಕಾಳಿಂಗ ನಾವಡರ ಒಡನಾಡಿಯೂ ಹೌದು ಎಂದು ಶ್ರೀಯುತ ಕೋಟ ಶಿವಾನಂದರು ಹೇಳಿದರು.

a60f8d78-b178-468c-994b-44832e45eafc

ನಮ್ಮ ಶಿವಣ್ಣ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗ್ಗಡೆ, ರಂಗದ ರಾಜ ಕೃಷ್ಣಯಾಜಿ, ಚಿಟ್ಟಾಣಿ ರಾಮಚಂದ್ರ ಹೆಗ್ಗಡೆ, ಅರ್ಗೋಡ್ ಮೋಹನದಾಸ್ ಶೈಣೈ, ಜಲವಳ್ಳಿ ವೆಂಕಟೇಶ್ ರಾವ್, ವಿದ್ಯಾಧರ ಜಲವಳ್ಳಿ, ತೀರ್ಥಹಳ್ಳಿ ಗೋಪಾಲಾಚಾರ್ಯನ್ನ ಮುಂತಾದ ಹಿರಿಯ ಕಿರಿಯ ಕಲಾವಿದರನ್ನ ಕುಣಿಸಿದ ಕೀರ್ತಿ ನಮ್ಮ ಕೋಟ ಶಿವಾನಂದರದ್ದು.
ಅಲ್ಲದೆ ಯಕ್ಷಗಾನದ ಮುಮ್ಮೇಳದಲ್ಲಿ ಬೇಡರ ಕಣ್ಣಪ್ಪದ ಕಾಶಿ ಮಾಣಿ, ಹಾಗೂ ದೇವಿ ಮಾಹಾತ್ಮೆಯ ಮಾಲಿನಿಯ ದೂತ, ವಿಜಯ, ಅಜ್ಜಿ ಮುಂತಾದ ಹಾಸ್ಯ ಪಾತ್ರವನ್ನು ಸಹ ರಂಗದಲ್ಲಿ ಮಾಡಿದ್ದಾರೆ. ಅಲ್ಲದೆ ಸಂದರ್ಭಕ್ಕನು ಗುಣವಾಗಿ ವೀರರಸ ಪಾತ್ರ ಪ್ರವೇಶಕ್ಕೆ ಖಳ ನಾಯಕನ ಅಬ್ಬರದ ಪ್ರವೇಶಕ್ಕೆ 5 ಹಾಗೂ 7 ಚಂಡೆವಾದನವನ್ನು ಬಡಗು ಹಾಗೂ ತೆಂಕಿನಲ್ಲೂ ಹೊಡೆಯಬಲ್ಲ ನೀಸ್ಸಿಮರು.

ಅಲ್ಲದೆ ಬಹುಮುಖ ಪ್ರತಿಭೆಯ ನಮ್ಮ ಕೋಟ ಶಿವಾನಂದರ ಇನ್ನೊಂದು ವಿಶೇಷ ಅಂದರೆ ಕಿರುತೆರೆಯಲ್ಲಿ ಧಾರಾವಾಹಿ ಶುಭ ವಿವಾಹ, ಕಂಜ್ಯುಸ್ ಕಮಂಗಿರಾಯ, ಹಾಗೂ ಕುಂದಕನ್ನಡದಲ್ಲಿ ಬೆಳ್ಳಿತೆರೆಯಲ್ಲಿ ಬಿಲೆಂಡರ್, ಅಣ್ಣು ಗೆರೆಗಳು, ಹರಿಕಥಾ ಪ್ರಸಂಗ ಮುಂತಾದ ಬೆಳ್ಳಿತೆರೆಯಲ್ಲಿ ನಟಿಸಿದ ಕೀರ್ತಿ ನಮ್ಮ ಕೋಟ ಶಿವಾನಂದನದ್ದು. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಅಭಿಮಾನಿಗಳು ಚಂಡೆಯ ಗಂಡುಗಲಿ, ೭ ಚಂಡೆಯ ಅಬ್ಬರದ ವಾದಕ ಮುಂತಾದ ಬಿರುದುಗಳನ್ನು ನೀಡಿ ರಂಗದಲ್ಲಿ 100ಕ್ಕೂ ಹೆಚ್ಚು ಸನ್ಮಾನಿಸಿದ್ದಾರೆ.

ಇವರ ಸಂಸಾರವನ್ನು ಅವಲೋಕಿಸಿದಾಗ ಸಹಧರ್ಮಿಣಿ ಶ್ರೀಮತಿ ಸುರೇಖಾ ಕೈಹಿಡಿದು ಕೀರತಿಗೊಬ್ಬ ಮಗ ಶಶಿಧರ ಹಾಗೂ ಆರತಿಗೊಬ್ಬ ಮಗಳು ಸಂಧ್ಯಾಳನ್ನು ಪಡೆದು ಕೋಟದಲ್ಲಿ ಪಡೆದು ಸುಖಿ ಜೀವನವನ್ನು ನಡೆಸುತ್ತಿದ್ದಾರೆ.
ಹೀಗೆ ಇವರ ಕಲಾಸೇವೆ ಮುಂದುವರೆಯಲಿ ಹಾಗೂ ನಾನು ನಂಬಿದ ಚಾರ ಮಹಿಷಮರ್ದಿನಿ ಅಮ್ಮನವರು ಮತ್ತು ಕಲಾಮಾತೆ ಸರಸ್ವತಿಯು ಇನ್ನು ಹೆಚ್ಚಿನ ಕಲಾಸೇವೆಯನ್ನು ಮಾಡುತ್ತಾ ಮುಂದುವರೆಯಲಿ ಜೀವನ ರಥ ಸಾಗುವಂತೆ ಆಶೀರ್ವದಿಸಲಿ ಎಂದು ಆಶಿಸುತ್ತೇನೆ.

– ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್

 

]]>
http://www.vknews.in/2016/07/27/yakshagana-4/feed/ 0
ನೀವು ಯಾರನ್ನಾದರೂ ಪ್ರೀತಿಸಿದ್ದೀರಾ ? http://www.vknews.in/2016/07/27/prithi/ http://www.vknews.in/2016/07/27/prithi/#respond Wed, 27 Jul 2016 07:07:19 +0000 http://www.vknews.in/?p=266382 cf80d42c-9b2b-4df6-94fd-d5e3d470c6fd
(ವಿಶ್ವ ಕನ್ನಡಿಗ ನ್ಯೂಸ್ ) : ನೀವು ಯಾರನ್ನಾದರೂ ಪ್ರೀತಿಸಿದ್ದೀರಾ ? ಇಲ್ಲ ಎನ್ನಬೇಡಿ ? ಏಕೆಂದರೆ, ಹಾಗೆ ಹೇಳಿದರೆ ಅದು ನಿಮ್ಮ ಶುದ್ಧ ಸುಳ್ಳು ಆಗುತ್ತದೆ ! ನಿಜ ಹೇಳಿ..ಪ್ರೀತಿಸಿಯೇ ಇಲ್ಲವೇ ? ಅಂದು.. ಇಂದು.. ಅಥವಾ ನಿನ್ನೆ.. ಮೊನ್ನೆಯಿಂದ..

ದಂಗಾಗಿ ಬಿಟ್ಟಿರಾ ? ಅದೇ ಮಳೆಗಾಲದಲ್ಲಿ ನೀವು ಅತಿಯಾಗಿ ಪ್ರೀತಿಸುವವರು ಯಾರು ? ಒಂದು ಬಾರಿ ನೆನಪಿಸಿಕೊಳ್ಳಿ.. ಈಗ ನೀವು ಒಪ್ಪಿಕೊಳ್ಳಲೇಬೇಕು ನಿಮ್ಮ ಪ್ರೀತಿಯ ಆಳವನ್ನು.. ನಿಮ್ಮ ಪ್ರೀತಿಯ ಆಳ ಎಷ್ಟಿರುತ್ತದೆ ಎಂದರೆ.. ನೀವು ಕಲಿಯುಗದ ಭೀಷ್ಮನಾಗಿದ್ದರೂ ಈ ಪ್ರೀತಿಯನ್ನು ಇಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ….

ಅಕಾಲದಲ್ಲಿ ಮಳೆ ಬಂದಾಗ ಮೈ ಪೂರ್ತಿ ಒದ್ದೆಯಾದಾಗ ಹಲವು ಬಾರಿ ನೆನಪಿಸಿಕೊಳ್ಳುವುದಿಲ್ಲವೇ ? ಆಕಾಶವೇ ತೂತಾಗಿ ಹೋದಂತೆ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರಗೆ

ಹೋಗಲೇಬೇಕೆಂದಾದಾಗ ಮನೆ ಮೂಲೆ ಮೂಲೆಯಲ್ಲಿ ಹುಡುಕಿ ಎತ್ತಿ ತಂದು ಮೈದಡುವುದಿಲ್ಲವೇ ? ಬಿಡಿಸುವಾಗ ಆಕಾಶ ಕಾಣುವಷ್ಟು ತೂತುಗಳಿದ್ದರೂ ಲೆಕ್ಕಿಸದೆ ಆಪತ್ಕಾಲದ ಆಪತ್ಭಾಂಧವ ಎಂದು ಮಳೆಯಿಂದ ರಕ್ಷಣೆಗಾಗಿ ಬೇಡಿಕೊಳ್ಳುವುದಿಲ್ಲವೇ ? ಕೆಲವೊಮ್ಮೆ ನಿಮ್ಮ ಪ್ರೀತಿಗೆ ಒಳಗೆ ಪ್ರವೇಶವಿಲ್ಲ ಎಂದಾದರೆ ಒಳಗೆ ಹೋದರೂ ಎಷ್ಟು ಬಾರಿ ಹೊರಗಿದ್ದ ಪ್ರೀತಿಯನ್ನು ನೆನಪಿಸಿಕೊಳ್ಳುವುದಿಲ್ಲ? ಸದಾ ಕಾಲ ಕೈಯಲ್ಲೇ ಹಿಡಿದಿದ್ದು, ಹಲವು ಬಾರಿ

ಮುತ್ತಿಡುವುದಿಲ್ಲವೇ ? ಈಗ ಹೇಳಿ.. ಪ್ರೀತಿ ಎಂದರೆ ಇದೇ ತಾನೆ ?
ಇಷ್ಟು ಹೇಳಿದರೂ ನಿಮ್ಮ ಪ್ರೀತಿ ಯಾರೆಂದು ಗೊತ್ತಾಗಿಲ್ಲವೇ ? ಬೇರೆ ಯಾರು ಅಲ್ಲ.. ಅದೇ ಕೊಡೆ ಕಣ್ರೀ.. ಅದೇ ಅಪ್ಪಟ ಕನ್ನಡದ ಛತ್ರಿ.. ಹೌದು, ಇದೀಗ ಕೊಡೆಗಳದ್ದೇ ಕಾಲ.. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿತ್ತಾಕರ್ಷಕ ಬಣ್ಣದ ಕೊಡೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹಿಂದೆ ಒಂದು ಕಾಲವಿತ್ತು.. ಕೊಡೆಗಳ ಬಟ್ಟೆ ದಪ್ಪನೆಯ ಕಾಟನ್ ಬಟ್ಟೆಯಲ್ಲಿದ್ದವು.. ಆದರೆ ಕ್ರಮೇಣ ಈ ಬಟ್ಟೆ ಮಾಯವಾಗಿ ದಪ್ಪನೆಯ ಫಾಲಿಸ್ಟರ್ ಬಟ್ಟೆಯ ಕೊಡೆಗಳು ಬಂದವು.
ಕೊಡೆಗಳ ವಿನ್ಯಾಸದಲ್ಲಿಯೂ ಬದಲಾವಣೆಗಳನ್ನು ಕಾಣಬಹುದು.. ಹಲವು ವರ್ಷಗಳ ಹಿಂದೆ ಉದ್ದನೆಯ ಕೊಡೆ.. ಅದಕ್ಕೆ ಒಂದು ಕೊಕ್ಕೆ.. ಇದು ಬಿಡಿಸುವುದಕ್ಕೂ ಸ್ವಲ್ಪ ನಿಧಾನವಾಗುತ್ತದೆ..ಅದೇ ರೀತಿ ಬಿಡಿಸುವುದು ಸ್ವಲ್ಪ ಪ್ರಯಾಸದ ಕೆಲಸವೂ ಆಗಿತ್ತು. ಆದರೆ ಇದನ್ನು ಹಿಮ್ಮೆಟ್ಟಿ ನಿಂತಿದ್ದು ಸ್ವಿಚ್ ಕೊಡೆ.. ಬಟನ್ ಅದುಮಿದರೆ ಸಾಕು ಕೊಡೆ ಅರಳುತ್ತದೆ. ಈಗ ಇಂತಹ ಕೊಡೆಗಳದ್ದೇ ಮೇಲುಗೈ ಇದ್ದರೂ ಯುವ ಜನಾಂಗ ನಮ್ಮ ಸ್ಟೈಲು ಬೇರೆನೆ ಎನ್ನುತ್ತಾ ಹಳೆ ಸ್ಟೈಲಿನ ಉದ್ದ ಕೊಡೆಗಳತ್ತ ಆಕರ್ಷಿತರಾಗಿದ್ದಾರೆ.

ಒಂದಾನೊಂದು ಕಾಲವನ್ನು ತೆಗೆದುಕೊಂಡರೆ ಕೊಡೆ ಎಂದರೆ ಏನೆಂದೇ ಗೊತ್ತಿಲ್ಲ. ಮಳೆಗಾಳಿಗೆ ಆಸರೆಯೇ ಗೊರಬು.. (ತುಳುವಿನ ಕೆಡೆಂಜೊಳು), ಕೆಸುವಿನ ಎಲೆ, ಬಾಳೆ ಎಲೆ, ಅಗಲವಾಗಿರುವ ಎಲೆಗಳೇ ಮಳೆ ಗಾಳಿಗೆ ರಕ್ಷಣೆ. ತೆಂಗಿನ ಗರಿಯಲ್ಲಿ ನೇಯ್ದು ತಯಾರಿಸುವ ಗೊರಬು ಹಿಂದಿನ ಕಾಲದ ಜನಪ್ರಿಯ ಕೊಡೆ. ನಮ್ಮ ತಾತ, ಮುತ್ತಾತರ ಕಾಲದಲ್ಲಿದ್ದ ಈ ಗೊರಬು, ಇಂದು ಕಾಣಸಿಗುವುದೇ ಇಲ್ಲ. ಇಂದಿನ ಪೀಳಿಗೆ ಈ ಗೊರಬನ್ನು ಗುರುತಿಸುವುದೂ ಕಷ್ಟ. ಯಾವುದೇ ವಸ್ತು ಸಂಗ್ರಹಾಲಯದಲ್ಲಿಯೂ ಇದು ಕಾಣಸಿಗದಿರುವುದು ಅಳಿಸಿ ಹೋದ ಪಟ್ಟಿಯಲ್ಲಿ ಸೇರಿಸಬೇಕಾದ ಹಳೆಯ ಕಾಲದ ಕರಕುಶಲ ಆಸ್ತಿ ಎಂದು ಹೇಳಬೇಕಷ್ಟೆ.

ಕಾಲ ಬದಲಾಯಿತೆನ್ನಬೇಕೋ ಅಥವಾ ಜನ ಬದಲಾದರೆನ್ನಬೇಕೋ ಗೊತ್ತಿಲ್ಲ.. ಅಂತು ಕೊಡೆಗಳಂತು ಬದಲಾಗಿರುವುದು ನಿಜ. ಈಗ ನಗರದ ಬೀದಿ ಬೀದಿಯಲ್ಲಿ ಕೊಡೆಗಳೇ ರಾರಾಜಿಸುತ್ತಿವೆ.. ಏಕೆಂದರೆ ಮಳೆರಾಯ ಅಬ್ಬರದಿಂದ ಪುರಪ್ರವೇಶಿಸಿದ್ದಾನೆ.

ಏನೇ ಹೇಳಿ ಕೊಡೆ ನಿಮ್ಮ ಪ್ರೀತಿಪಾತ್ರರು ಎಂಬುದು ಈಗಲಾದರೂ ತಿಳಿದಿರಬಹುದಲ್ಲವೇ ? ಹಾಗಾದರೆ ನೀವು ಪ್ರೀತಿಸಿರುವುದು ನಿಜ.. ಮಾತ್ರವಲ್ಲ ಪ್ರೀತಿಸಲೇಬೇಕು.. ಏಕೆ ಗೊತ್ತೇ ? ಮಳೆಯಿಂದ ನಿಮಗೆ ರಕ್ಷಣೆ ಬೇಕು ತಾನೆ ?

– ಇಂದಿರಾ ಎನ್ ಕೆ ಕೂಳೂರು, ಮಂಗಳೂರು

]]>
http://www.vknews.in/2016/07/27/prithi/feed/ 0