ಯುಎಇ ಮತ್ತು ಭಾರತ ನಡುವಿನ ಸಂಭಂದ ವೃದ್ಧಿ : ಏಳು ಒಪ್ಪಂದಗಳಿಗೆ ಸಹಿ ** ಶಿವಮೊಗ್ಗ ಜಿಲ್ಲಾ ಸುದ್ದಿಗಳು ** ದಾರುನ್ನೂರ್ ವತಿಯಿಂದ ಅದ್ದೂರಿಯಾಗಿ ನಡೆದ ಜೀಲಾನಿ ಅನುಸ್ಮರಣೆ ಹಾಗೂ ಸಮಸ್ತ 90ನೇ ಪ್ರಚಾರ ಸಂಗಮ ** ಓಟು : (ವಿಕೆ ಕಾರ್ಟೂನ್) ** ಗುಡಿಬಂಡೆ : ಶೇ. 80.97 ರಷ್ಟು ಶಾಂತಿಯುತ ಮತದಾನ ** ಶಿಡ್ಲಘಟ್ಟ : ತಾಲೂಕಿನ ಹಿರಿಯ ಮುತ್ಸದ್ದಿ ಶತಾಯುಷಿ ಬಿ.ಕೆ.ನಾರಾಯಣಸ್ವಾಮಿ ತಮ್ಮ ಮೊಮ್ಮಕ್ಕಳೊಂದಿಗೆ ಮತದಾನ ** ಜೆ.ಡಿ.ಎಸ್ ಪಕ್ಷ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಜಿ ಸಚಿವರ ಲೆಕ್ಕಾಚಾರವನ್ನು ಮತದಾರರು ಉಲ್ಟಾ ಮಾಡಲಿದ್ದಾರೆ - ಶಾಸಕ ಎಂ.ರಾಜಣ್ಣ ** ಶಿಡ್ಲಘಟ್ಟ : ಗಂಗನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ** ಗುಡಿಬಂಡೆ : ಹಲವು ಕಡೆ ಶ್ರದ್ಧಾ ಭಕ್ತಿಯಿಂದ ಷಷ್ಠಿ ಹಬ್ಬ ಆಚರಣೆ ** ಹುರಿಯತ್ ನಾಯಕ ಸಯೀದ್ ಅಲಿ ಗಿಲಾನಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಭೂಗತ ಪಾತಕಿ ರವಿ ಪೂಜಾರಿ ** ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಫೈನಲ್ : ಸಚಿನ್ ಜೋಷಿ ಬ್ಯಾಟಿಂಗ್ ಬಿರುಗಾಳಿಗೆ ನಡುಗಿದ ಕರ್ನಾಟಕ ಬುಲ್ದೋಜರ್ಸ್ ** ಉಗ್ರರ ಗುಂಡಿಗೆ ಎದೆಯೊಡ್ಡಿ ಹುತಾತ್ಮನಾದ ಕನ್ನಡಿಗ ಯೋಧ ಸಹದೇವ ಮಾರುತಿ ಮೋರೆ ** ಅಂಡರ್-19 ವಿಶ್ವ ಕಪ್ ಫೈನಲ್ : ಕೇವಲ 145 ರನ್ ಗಳಿಗೆ ಮುಗ್ಗರಿಸಿದ ಭಾರತ ** ಸೂಟು ವಾಚಿನ ಗದ್ದಲದಲ್ಲಿ ಚರ್ಚೆಯಾಗದ ಸಂಗತಿಗಳು... ** ಕಡೆಗೂ ಅವಳ ಪೋನ್ ರಿಂಗಾಯಿತು ಎಂದು.... ** ಪ್ರೀತಿ (ಕವನ) ** ದಾರುಲ್ ಐತೆಮ್ ವಲ್ ಮಸಾಕೀನ್(ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ) 20ನೇ ವಾರ್ಷಿಕ ಮಹಾಸಭೆ ** ವ್ಯಾಲೇನ್‍ಟೈನ್ ಕವನ ** ಪ್ರೇಮಿಗಳ ದಿನ ಮತ್ತು ಇಸ್ಲಾಂ.. (ಅಂಧಾಲೋಕ 19) ** ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ನೀಡಲಾಗಿದೆ, ಅದಕ್ಕೂ ಕೆಲವು ಇತಿ, ಮಿತಿಗಳಿವೆ, ಶೈಕ್ಷಣಿಕ ಸಂಸ್ಥೆ ರಾಷ್ಟ್ರ ವಿರೋಧಿಗಳ ತಾಣವಾಗಲು ಬಿಡುವುದಿಲ್ಲ :ಕಿರಣ್ ರಿಜಿಜು

“ಮಾತಿನಲ್ಲೇ ಮುತ್ತು ಸುರಿಸುವ ಅವಿನಾಶ್ ಕಾಮತ್”

ವಿಶ್ವಕನ್ನಡಿಗ ಪ್ರತಿಭಾ ರಂಗ ಐದನೇ ಸಂಚಿಕೆ – ನಿತಿನ್ ರೈ, ಕುಕ್ಕುವಳ್ಳಿ ಸಾರಥ್ಯ..

ಒಬ್ಬ ವ್ಯಕ್ತಿಗೆ ಮತ್ತೊಂದು ಹೃದಯದಲ್ಲಿ ಮನೆ ಮಾಡಲು ಆ ವ್ಯಕ್ತಿಯ ಮಾತು ಮುತ್ತಿನಂತಿದ್ದರೆ ಹೆಚ್ಚು ಸಮಯ ಬೇಕಾಗಲ್ಲ. ಮಾತಿಗೆ ಅಷ್ಟೊಂದು ಶಕ್ತಿ ಇದೆ. ಹೃದಯ ಕದಿಯೋ ತಾಕತ್ ಇದೆ. ಹಾಗೆ ನಮ್ಮ ಸಂಚಿಕೆಯ ಇಂದಿನ ಪ್ರತಿಭೆ ” ಅದೆಷ್ಟೋ ಹೃದಯಗಳಿಗೆ ಲಗ್ಗೆ ಇಟ್ಟು ಅವರ ಹೃದಯದಲ್ಲಿ ಜಾಗ ಪಡೆದುಕೊಂಡಂತಹ ಅವಿನಾಶ್ ಕಾಮತ್.

ಉಡುಪಿಯ ಟಿ.ಎ.ಪೈ ಇಂಗ್ಲಿಷ್ ಮಾಧ್ಯಮ ಸ್ಕೂಲ್ ನಲ್ಲಿ ಓದಿದ ಅವಿನಾಶ್ ಕನ್ನಡದ ಬಗ್ಗೆ ತನಗಿರುವ ಮಿಡಿತವನ್ನ ಇಂದಿಗೂ ಮುಂದುವರಿಸುತ್ತಾ ಬಂದಿದ್ದಾರೆ. ಮಣಿಪಾಲದ ಎ೦ಐಸಿ ಮಾಸ್ ಕಮುನಿಕೆಶನ್ ಓದಿರುವ ಅವಿನಾಶ್ ಜೀವನ ಹರಸಿದ್ದು “ಮಾತಿನ” ಲೋಕದಲ್ಲಿ. ಮಂಗಳೂರು ಪ್ರವೇಶಿಸಿದ ಅವಿನಾಶ್ ಕೆಲಸ ಗಿಟ್ಟಿಸಿಕೊಂಡದ್ದು ಜನಪ್ರಿಯ ಬಿಗ್ ಎಫ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿ. ತನ್ನ ಮಾತಿನ ಮೂಲಕ ನೊಂದ ಮನಸ್ಸುಗಳ ಹೃದಯಕ್ಕೆ ಮುಂಗಾರು ಮಳೆಯನ್ನ ಸುರಿಸಿ ತಂಪು ಮಾಡಿದ ಹುಡುಗನೀತ. “U” ಚಾನೆಲ್ ನಲ್ಲಿ “U ಡಯಲ್ ” ಕಾರ್ಯಕ್ರಮದಲ್ಲಿ 90 ಸಂಚಿಕೆ ನಡೆಸುಕೊಟ್ಟು ಹಾಗೆ “ಲಕ್ಕಿ ಅವರ್ ಗೇಮ್ ಶೋ” ಹಾಗೆ ವಿವಿಧ ಕಾರ್ಯಕ್ರಮಗಳನ್ನ ಜನರ ಮುಂದೆ ತಂದಿದ್ದಾರೆ. ಸಭಾ ಕಾರ್ಯಕ್ರಮದ ನಿರೂಪಕನಾಗಿ ಲೆಕ್ಕಕ್ಕೆ ಸಿಗದಷ್ಟು ಕಾರ್ಯಕ್ರಮಗಳ ಕೇಂದ್ರಬಿಂದುವಾದ ಅವಿನಾಶ್ ದಕ್ಷಿಣಕನ್ನಡ ಹಾಗು ಉಡುಪಿ ಜನರ ಪ್ರೀತಿಯ ಆರ್.ಜೆ ಅವಿನಾಶ್ ಅನ್ನಿಸಿಕೊಂಡಿದ್ದಾರೆ.

ಮಳೆ ಕವಿಯ ಅಪ್ಪಟ ಅಭಿಮಾನಿ – ಅವಿನಾಶ್ ಪ್ರತಿಭೆ ಗರಿಬಿಚ್ಚಿಕೊಂಡದ್ದು ಒಬ್ಬ ಅಭಿಮಾನಿಯಾಗಿ. ತನ್ನದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿಸಿಕೊಂಡಿದ್ದ ಅವಿನಾಶ್ ಮತ್ತೊಬ್ಬರ ಅಪ್ಪಟ ಅಭಿಮಾನಿಯಾದದ್ದು ಮಾತ್ರ ವಿಶಿಷ್ಟ. ಅವಿನಾಶ್ ಜಯಂತ್ ಕಾಯ್ಕಿಣಿ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಮೊದಲ ಸ್ಥಾನ ಪಡೆದ ಅಭಿಮಾನಿ ಅಂದರೆ ತಪ್ಪಾಗಲಾರದು. ತನ್ನ ಪ್ರೀತಿಯ ಕವಿಗೆ ಈ ಅಭಿಮಾನಿ ಅರ್ಪಿಸಿದ ಕಾಣಿಕೆ “ಈ ನಯನ ನೂತನ” ಅನ್ನೋ ಪುಸ್ತಕ. ಇದು ಕೇವಲ ಪುಸ್ಥಕವಾಗಿರಲಿಲ್ಲ ಇಲ್ಲಿ ಜಯಂತ್ ಕಾಯ್ಕಿಣಿ ಅವರೇ ಆಶ್ಚರ್ಯ ಪಡುವಂತಹ ಸಂಗತಿಗಳಿದ್ದವು. ತನ್ನ 25 ನೆ ವಯಸ್ಸಿನಲ್ಲಿ ಸಾಹಿತ್ಯ ಲೋಕದಲ್ಲಿ ಹೊಸಮುಖವಾಗಿ ಕಾಣಿಸಿಕೊಂಡ ಅವಿನಾಶ್ ಅವರ ಬರವಣಿಗೆ ನೋಡುವಾಗ ಬರವಣಿಗೆ ಲೋಕಕ್ಕೆ ಹೊಸಬರು ಅನ್ನೋ ಅಂಶವನ್ನ ಮರೆಮಾಚುವಂತಿತ್ತು. ಈ ಪುಸ್ತಕದಲ್ಲಿ ಯೋಗರಾಜ್ ಭಟ್, ರಮೇಶ್, ಮನೋಮೂರ್ತಿ ಮುಂತಾದ ಗಣ್ಯರು ಜಯಂತ್ ಕಾಯ್ಕಿಣಿ ಅವರ ಬಗ್ಗೆ ಬರೆದಿದ್ದಾರೆ. ಮತ್ತೊಂದು ವಿಶೇಷ ಅಂದರೆ ಮುನ್ನುಡಿ ಬರೆದಿರುವವರು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು. ಈ ಪುಸ್ತಕದಲ್ಲಿ ಜಯಂತ್ ಕಾಯ್ಕಿಣಿ ಬರೆದ ಹಾಡುಗಳ ಸೌಂದರ್ಯವಿದೆ. ಹಾಡಿನ ಒಳಗಿನ ಅರ್ಥಗಳಿವೆ. ಯುವ ಪೀಳಿಗೆಯ ಮನಸ್ಸಿಗೆ ಜಯಂತ್ ಅವರು ಹರಿಸಿದ ಹಾಡಿನ ಹನಿಗಳಿವೆ. ಪ್ರಸ್ತುತ ಸ್ಪಂದನ ಟಿವಿ ಯಲ್ಲಿ ನಿರೂಪಕನಾಗಿ ಕೆಲಸನಿರ್ವಹಿಸುತ್ತಿರುವ ಅವಿನಾಶ್, ಯುವ ಹಾಡುಗಾರರ ಹಾಡುಗಳ ಸಂಗಮ ” ಹಾಡು ಕೋಗಿಲೆ” ಹಾಗು “ರಂಗಿನ ದುನಿಯಾ” ಅನ್ನೋ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದಾರೆ. ಬಾಗ್ಯ ಅನ್ನೋ ಕನ್ನಡ ಸಿನಿಮಾದಲ್ಲೂ ನಟಿಸಿರುವ ಅವಿನಾಶ್ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೂ ತನ್ನ ಯಶಸ್ಸುಗಳಿಸಲಿ ಅನ್ನೋದು ವಿಶ್ವ ಕನ್ನಡಿಗ ತಂಡದ ಹಾರೈಕೆ.

Posted by on April 28 2012 12:59:42 PM. Filed under ವಿಕೆ ನ್ಯೂಸ್ ಪ್ರತಿಭಾರಂಗ. You can follow any responses to this entry through the RSS 2.0. Both comments and pings are currently closed.

3 Comments for ““ಮಾತಿನಲ್ಲೇ ಮುತ್ತು ಸುರಿಸುವ ಅವಿನಾಶ್ ಕಾಮತ್””

  1. Amitha Kamath

    congrats Avi…. All the Best….

  2. may u hav a bright future….gud luck

  3. janardhankodavoor

    ಮುಂದಿನ ದಿನಗಳಲ್ಲಿ innu ಯಶಸ್ಸುಗಳಿಸಲಿ …

Comments are closed

ಇತ್ತೀಚಿನ ಹೆಡ್ ಲೈನ್ಸ್

ಸುದ್ದಿಗಳು

ಗಮನಿಸಿರಿ

ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66A ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ

ಅಬ್ದುಲ್ ಹಮೀದ್ .ಸಿ .ಹೆಚ್.
ಪ್ರಧಾನ ಸಂಪಾದಕರು
editor@vknews.in

Copy Protected by Chetan's WP-Copyprotect.